English/ अंग्रेज़ी |
Kannada/ कन्नड़ |
Definition/ पारिभाषा |
Feedback/प्रतिपुष्टि |
Gesinnung (= political Consciousness) | ರಾಜಕೀಯಪ್ರಜ್ಞೆ | ಆಡಳಿತದ ಚಟುವಟಿಕೆಗಳು ಮತ್ತು ರಾಜಕೀಯ ಚಟುವಟಿಕೆಗಳಿಗೆ ಸಂಬಂಧಿಸಿದ ಸಾಮಾನ್ಯ ಜ್ಞಾನ. | प्रतिपुष्टि |
political Agent ( = resident) | ರಾಜಕೀಯ ಪ್ರತಿನಿಧಿ | ಭಾರತಕ್ಕೆ ಸ್ವಾತಂತ್ರ್ಯ ದೊರೆಯುವುದಕ್ಕೂ ಮುನ್ನ ದೇಶೀಯ ಸಂಸ್ಥಾನಗಳಲ್ಲಿ ಇಂಗ್ಲಿಷ್ ಸರ್ಕಾರದ ಪ್ರತಿನಿಧಿಗಳಾಗಿರುತ್ತಿದ್ದ ಅಧಿಕಾರಿಗಳು. ಇವರು ತಾತ್ವಿಕವಾಗಿ ರಾಜ್ಯದ ಸಲಹೆಗಾರರಾಗಿದ್ದರು. | प्रतिपुष्टि |
political Asylum | ರಾಜಕೀಯ ಆಶ್ರಯ | ಯಾವುದೇ ವ್ಯಕ್ತಿಯು ತನ್ನ ಮತ ಅಥವಾ ನಂಬಿಕೆಗಳ ಕಾರಣದಿಂದಾಗಿ ಅಥವಾ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದರಿಂದ, ಹಿಂಸೆಯ ಭಯದಿಂದ ಬೇರೆ ದೇಶಗಳಿಗೆ ಓಡಿ ಹೋಗುವುದು ಮತ್ತು ಅಲ್ಲಿನ ಸರ್ಕಾರ ಅವನಿಗೆ ಆಶ್ರಯ ನೀಡುವುದು. ಅಂತಹ ವ್ಯಕ್ತಿಯು ಕೆಲವೊಮ್ಮೆ ತನ್ನ ದೇಶದಲ್ಲಿರುವ ವಿದೇಶಿ ರಾಯಭಾರ ಕಚೇರಿಗಳಲ್ಲೂ ಆಶ್ರಯ ಪಡೆಯಬಹುದು. ಆದಾಗ್ಯೂ, ಅಂತಾರಾಷ್ಟ್ರೀಯ ಕಾನೂನು ರಾಯಭಾರ ಕಚೇರಿಗಳಲ್ಲಿ ಆಶ್ರಯ ಪಡೆಯುವ ಹಕ್ಕನ್ನು ಸಾಮಾನ್ಯವಾಗಿ ಗುರುತಿಸುವುದಿಲ್ಲ. | प्रतिपुष्टि |
political Behaviour | ರಾಜಕೀಯ ನಡವಳಿಕೆ | ವ್ಯಕ್ತಿ ಅಥವಾ ಸಮೂದಯಾವು ರಾಜಕೀಯ ಘಟನೆಗಳ ಹಾಗೂ ವಿಷಯಗಳ ಕುರಿತ ನಡವಳಿಕೆ, ಮನೋಭಾವ ಮಾತ್ತು ಭಾಗವಹಿಸುವಿಕೆ. ರಾಜಕೀಯ ವ್ಯವಸ್ಥೆಯ ವಿವಿಧ ಅಂಗಗಳ ಅಂಶಗಳ ನಡವಳಿಕೆ. ಇದರಲ್ಲಿ ರಾಜಕೀಯ ವ್ಯವಸ್ಥೆಗೆ ಸಂಬಂಧಿಸಿದ ಜನರ ನಡವಳಿಕೆಯೂ ಸೇರಿದೆ. ಉದಾಹರಣೆಗೆ ಚುನಾವಣೆಯಲ್ಲಿ ಮತ ಚಲಾಯಿಸುವುದು. | प्रतिपुष्टि |
political Change | ರಾಜಕೀಯ ಬದಲಾವಣೆ | ಸಮಾಜದಲ್ಲಿ ರಾಜಪ್ರಭುತ್ವದ ಬಳಕೆ ಅಥವಾ ವಿತರಣೆಗೆ ಸಂಬಂಧಿಸಿದ ರಚನೆಗಳು, ಪ್ರಕ್ರಿಯೆಗಳು ಮತ್ತು ಗುರಿಗಳಲ್ಲಿ ಆಗುವ ಬದಲಾವಣೆಗಳು. ಈ ರಚನೆಗಳು ಮತ್ತು ಪ್ರಕ್ರಿಯೆಗಳಲ್ಲಿ ಆಮೂಲಾಗ್ರ ಬದಲಾವಣೆಗಳಾದಾಗ, ಅದರಲ್ಲೂ ನಿಯಮಿತ ಅಥವಾ ಸಾಂವಿಧಾನಿಕ ಕ್ರಮಗಳಿಲ್ಲದ ಕ್ರಮಗಳಿಂದ ಈ ಬದಲಾವಣೆಗಳನ್ನು ರಾಜಕೀಯ ಕ್ರಾಂತಿ ಎಂದು ಕರೆಯಬಹುದು. | प्रतिपुष्टि |
political Communication | ರಾಜಕೀಯ ಸಂವಹನ | ರಾಜಕೀಯ ಸಂಬಂಧಿತ ವ್ಯವಹಾರವನ್ನು ಜನರು, ರಾಜಕೀಯ ನಾಯಕರು, ವ್ಯಕ್ತಿಯ ವ್ಯವಹಾರಗಳು ಹಾಗೂ ಸಾರ್ವಜನಿಕರು ಪರಸ್ಪರ ವಿನಿಮಯ ಮಾಡಿಕೊಳ್ಳುವ ಪ್ರಕ್ರಿಯೆ. ಇದು ಅಭಿಪ್ರಾಯಗಳ ಕೊಡುಕೊಳ್ಳುವಿಕೆ ಮತ್ತು ರಾಜಕೀಯ ತೀರ್ಮಾನಗಳಿಗೆ ಕಾರಣವಾಗುತ್ತದೆ ರಾಜಕೀಯ ವ್ಯವಸ್ಥೆಯ ಕಾರ್ಯಾಚರಣೆಗೆ ಸಂಬಂಧಿಸಿದ ಸುದ್ದಿಗಳ ಪ್ರಸಾರ ಅಥವಾ ಪ್ರಕಟಣೆ. ದೂರದರ್ಶನ, ಆಕಾಶವಾಣಿ, ವಾರ್ತಾಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಹೊರತಾಗಿ, ಈ ರೀತಿಯ ಸಂವಹನವನ್ನು ಸಾಂಕೇತಿಕ ಚಟುವಟಿಕೆಗಳು ಅಥವಾ ದುಷ್ಕೃತ್ಯಗಳಾದ ಪ್ರತಿಭಟನೆ, ಮುತ್ತಿಗೆ, ರಾಜಕೀಯ ಹತ್ಯೆಗಳು ಇತ್ಯಾದಿಗಳಿಂದ ಮಾಡಬಹುದು. | प्रतिपुष्टि |
political Crime | ರಾಜಕೀಯ ಅಪರಾಧ | ಯಾವುದೇ ರಾಜಕೀಯ ಚಿಂತನೆಯಿಂದ ಅಥವಾ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಅಥವಾ ಆಡಳಿತಾತ್ಮಕ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ನಡೆಸುವ ಕಾನೂನುಬಾಹಿರ ಚಟುವಟಿಕೆಗಳು. | प्रतिपुष्टि |
political Culture | ರಾಜಕೀಯ ಸಂಸ್ಕೃತಿ | ರಾಜಕೀಯ ವ್ಯವಸ್ಥೆ ಮತ್ತು ಅದರ ಸಂಸ್ಥೆಗಳ ಬಗ್ಗೆ ಸಾಮಾನ್ಯ ನಾಗರಿಕರ ಅಭಿರುಚಿ, ಪ್ರತಿಕ್ರಿಯೆ, ಅವರ ನಂಬಿಕೆ, ಪಾಲ್ಗೊಳ್ಳುವಿಕೆ ಮತ್ತು ಸಮಾಜದಲ್ಲಿ ಸ್ವೀಕೃತವಾದ ರಾಜಕೀಯ ಮೌಲ್ಯಗಳು ಇವೆಲ್ಲವನ್ನೂ ಒಳಗೊಳ್ಳುವ ಒಟ್ಟೂ ನಡಾವಳಿಯೇ ರಾಜಕೀಯ ಸಂಸ್ಕೃತಿ. | प्रतिपुष्टि |
political Development | ರಾಜಕೀಯ ಬೆಳವಣಿಗೆ | ಪಾಶ್ಚಾತ್ಯ ಚಿಂತಕರ ಪ್ರಕಾರ ರಾಜಕೀಯ ಬೆಳವಣಿಗೆ ಎಂದರೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ರಾಜಕೀಯ ವ್ಯವಸ್ಥೆಯು ಆಧುನಿಕ ಉದಾರವಾದಿ ಪ್ರಜಾಪ್ರಭುತ್ವದ ದಿಕ್ಕಿನಲ್ಲಿ ನಿರಂತರವಾಗಿ ಚಲಿಸುವುದಾಗಿದೆ. ದೇಶದ ಅಭಿವೃದ್ಧಿಯ ಜೊತೆಗೆ ರಾಜಕೀಯ ಬಲವರ್ಧನೆಯನ್ನು ಒಳಗೊಂಡಿರುತ್ತದೆ. | प्रतिपुष्टि |
political Encirclement ( = Capitalistic Encirclement) | ರಾಜಕೀಯ ಮುತ್ತಿಗೆ (ಬಂಡವಾಳಶಾಹಿ ಮುತ್ತಿಗೆ) | ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ರಾಷ್ಟ್ರದ ಹೆಚ್ಚುತ್ತಿರುವ ಪ್ರಭಾವ, ಪ್ರಗತಿ ಇತ್ಯಾದಿಗಳನ್ನು ಕಡಿಮೆ ಮಾಡಲು ಅಥವಾ ತಡೆಯಲು ವಿರೋಧಿಸುವ ರಾಜಕೀಯ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರಗಳಿಂದ ನೆರೆಯ ರಾಷ್ಟ್ರಗಳಿಗೆ ಸಹಕಾರ. ಇಂತಹ ಪ್ರಯತ್ನಗಳಲ್ಲಿ ನೆರೆಹೊರೆಯ ರಾಷ್ಟ್ರಗಳಿಗೆ ಮಿಲಿಟರಿ ಮತ್ತು ಆರ್ಥಿಕ ನೆರವು ನೀಡುವುದು, ಅವುಗಳ ಸ್ನೇಹಿತರನ್ನು ಬಲಹೀನರನ್ನಾಗಿ ಮಾಡುವುದು, ಎಲ್ಲ ರೀತಿಯ ರಾಜಕೀಯ ಮತ್ತು ವಾಣಿಜ್ಯ ಸಂಬಂಧಗಳಿಗೆ ಅಡ್ಡಿಯಾಗುವುದು ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅವುಗಳನ್ನು ಬಲಹೀನರನ್ನಾಗಿ ಮಾಡುವುದು ಸೇರಿವೆ. ರಾಜಕೀಯ ಮುತ್ತಿಗೆ ಮೂಲಭೂತವಾಗಿ ಬಂಡವಾಳಶಾಹಿ ದೇಶಗಳಿಂದ ಕಮ್ಯುನಿಸ್ಟ್ ರಾಷ್ಟ್ರಗಳ ಪ್ರಗತಿ ಮತ್ತು ಪ್ರಭಾವವನ್ನು ತಡೆಯುವ ಉದ್ದೇಶದಿಂದ ಪ್ರಾರಂಭವಾಯಿತು. | प्रतिपुष्टि |
political Equality | ರಾಜಕೀಯ ಸಮಾನತೆ | ರಾಜಕೀಯ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಮತದಾನದ ಹಕ್ಕು, ಸ್ಥಾನಗಳಿಗೆ ಆಯ್ಕೆಯಾಗುವ ಹಕ್ಕು, ಇತ್ಯಾದಿ ಸಮಾನ ಹಕ್ಕುಗಳನ್ನು ನೀಡಲಾಗಿದೆ. | प्रतिपुष्टि |
political Executive | ರಾಜಕೀಯ ಕಾರ್ಯನಿರ್ವಹಣೆ | ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರದ ಮೂರು ಪ್ರಮುಖ ಅಂಗಗಳಾದ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗ ವ್ಯವಸ್ಥೆಯ ಒಂದು ಅಂಗ. ರಾಜಕೀಯ ಕಾರ್ಯನಿರ್ವಾಹಕವು ಪ್ರಧಾನಮಂತ್ರಿ ಮತ್ತು ಸಂಪುಟವನ್ನು ಒಳಗೊಂಡಿರುತ್ತದೆ. ಅಧಿಕಾರಿತ್ವ ರಾಜಕೀಯ ಕಾರ್ಯನಿರ್ವಾಹಕತೆಯ ಭಾಗವಲ್ಲ. ಅಧಿಕಾರ ವ್ಯವಸ್ಥೆಯನ್ನು ಶಾಶ್ವತ ಕಾರ್ಯಕಾರಿ ಎಂದು ಕರೆಯಲಾಗುತ್ತದೆ. | प्रतिपुष्टि |
political Freedom/liberty | ರಾಜಕೀಯ ಸ್ವಾತಂತ್ರ್ಯ | ದೇಶದಲ್ಲಿ ಮತದಾನ ಮತ್ತು ಚುನಾಯಿತರಾಗುವಂತಹ ರಾಜಕೀಯ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ಹಕ್ಕು ನಾಗರಿಕರಿಗೆ ಇದೆ. ರಾಜಕೀಯ ಪಕ್ಷಗಳನ್ನು ರಚಿಸುವ, ಸಭೆಗಳನ್ನು ನಡೆಸುವ, ಅವುಗಳಲ್ಲಿ ಪಾಲ್ಗೊಳ್ಳುವ ಮತ್ತು ಅವುಗಳ ಬಗ್ಗೆ ಯೋಚಿಸುವ ಹಕ್ಕನ್ನು ಇದು ಒಳಗೊಂಡಿದೆ. | प्रतिपुष्टि |
political Independence | ರಾಜಕೀಯ ಸ್ವಾತಂತ್ರ್ಯ | ಬಾಹ್ಯ ಮತ್ತು ಆಂತರಿಕ ವಿಚಾರಗಳಲ್ಲಿ ಸ್ವಾತಂತ್ರ್ಯ ವಿದೇಶೀ ಶಕ್ತಿಯಿಂದ ಮುಕ್ತವಾದ ಸಾರ್ವಭೌಮತ್ವದ ಸ್ಥಿತಿ. ಒಂದು ರಾಷ್ಟ್ರ ಅಥವಾ ಪ್ರದೇಶವು ಹೊರಗಿನ ಯಾವುದೇ ಆರ್ಥಿಕತೆಯಿಲ್ಲದೆ, ತನ್ನ ರಾಜಕೀಯ ನಿರ್ಧಾರಗಳನ್ನು ತಾನೇ ಸ್ವತಂತ್ರವಾಗಿ ತೆಗೆದುಕೊಳ್ಳುವುದು. | प्रतिपुष्टि |
political Modernization | ರಾಜಕೀಯ ಆಧುನೀಕರಣ | ಇದು ಪಾಶ್ಚಾತ್ಯ ರಾಜಕೀಯ ಪರಿಕಲ್ಪನೆಯಾಗಿದೆ. ಸಾಂಪ್ರದಾಯಿಕ, ಪರಂಪರಾಗತ, ಸಾಮಂತ ಅಥವಾ ಸರ್ವಾಧಿಕಾರಿ ರಾಜಕೀಯ ವ್ಯವಸ್ಥೆಯನ್ನು ಆಧುನಿಕ ಉದಾರವಾದಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನಾಗಿ ಪರಿವರ್ತಿಸುವುದು ರಾಜಕೀಯ ಆಧುನೀಕರಣವಾಗಿದೆ. | प्रतिपुष्टि |
political Party | ರಾಜಕೀಯ ಪಕ್ಷ | ತತ್ವಗಳು, ಸಂಘಟನೆಗಳು, ನಾಯಕತ್ವ ಮತ್ತು ಪ್ರಣಾಳಿಕೆಯನ್ನು ಹೊಂದಿರುವ ಸಾರ್ವಜನಿಕ ಹಿತಾಸಕ್ತಿಯ ಸ್ಫೂರ್ತಿಯಿಂದ ಪ್ರೇರಿತರಾದ ನಾಗರಿಕರ ಗುಂಪು. ರಾಜಕೀಯ ಪಕ್ಷಗಳ ಮುಖ್ಯ ಕಾರ್ಯವೆಂದರೆ ಚುನಾವಣೆಯಲ್ಲಿ ಭಾಗವಹಿಸುವುದು ಅಥವಾ ಅದರ ಮೇಲೆ ಪ್ರಭಾವ ಬೀರುವುದು. | प्रतिपुष्टि |
political Philosophy | ರಾಜಕೀಯ ತತ್ವಶಾಸ್ತ್ರ | ರಾಷ್ಟ್ರಕ್ಕೆ ಸಂಬಂಧಿಸಿದ ಮೌಲ್ಯಗಳು, ಮಾನದಂಡಗಳು ಮತ್ತು ತತ್ವಗಳ ಆದರ್ಶ ವಿಶ್ಲೇಷಣೆ ಮತ್ತು ವಿವರಣೆಯನ್ನು ಒದಗಿಸುವ ರಾಜಕೀಯ ವಿಜ್ಞಾನ/ತತ್ವಶಾಸ್ತ್ರದ ಭಾಗ. | प्रतिपुष्टि |
political Rights | ರಾಜಕೀಯ ಹಕ್ಕುಗಳು | ರಾಜಕೀಯ ವ್ಯವಸ್ಥೆ ಮತ್ತು ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ವ್ಯಕ್ತಿಗೆ ಅವಕಾಶ ನೀಡುವ ಮತ್ತು ಸಾಮಾನ್ಯವಾಗಿ ರಾಷ್ಟ್ರದ ಪ್ರಜೆಗಳಿಗೆ ನೀಡಲಾಗುವ ಹಕ್ಕುಗಳು. ಉದಾಹರಣೆಗೆ, ಮತದಾನದ ಹಕ್ಕು, ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು, ಸಭಾ ಸಮಿತಿಗಳನ್ನು ರಚಿಸುವ ಹಕ್ಕು, ಸಮಾವೇಶಗಳನ್ನು ನಡೆಸುವ ಹಕ್ಕು ಇತ್ಯಾದಿ. | प्रतिपुष्टि |
political Science | ರಾಜಕೀಯ ವಿಜ್ಞಾನ | ರಾಜಕೀಯ ವಿಜ್ಞಾನ ಎಂದರೆ ರಾಜ್ಯ ಮತ್ತು ಸರ್ಕಾರದ ವಿವಿಧ ಅಂಶಗಳ ವೈಜ್ಞಾನಿಕ ವಿಶ್ಲೇಷಣೆ. ಆಧುನಿಕ ಕಾಲದಲ್ಲಿ ಇದನ್ನು ರಾಜಕೀಯ ವ್ಯವಸ್ಥೆ ಮತ್ತು ಸಾರ್ವಜನಿಕ ನೀತಿಯನ್ನು ಅಧ್ಯಯನ ಮಾಡುವ ಶಾಸ್ತ್ರ ಎಂದು ಪರಿಗಣಿಸಲಾಗಿದೆ ಮತ್ತು ಔಪಚಾರಿಕ ಸಂಸ್ಥೆಗಳು ಮತ್ತು ಕಾನೂನು ಸಂಬಂಧಗಳ ಬದಲು ಪ್ರಕ್ರಿಯೆಗಳು, ಪಾತ್ರಗಳು ಮತ್ತು ಅನೌಪಚಾರಿಕ ರಚನೆಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಶಕ್ತಿ ಸಂಘರ್ಷವು ಈಗ ಅದರ ಅಧ್ಯಯನದ ಕೇಂದ್ರಬಿಂದುವಾಗಿದೆ. | प्रतिपुष्टि |
political Socialization | ರಾಜಕೀಯ ಸಾಮಾಜೀಕರಣ | ದೇಶದ ರಾಜಕೀಯ ಸಂಸ್ಕೃತಿಯಲ್ಲಿ ಅಲ್ಲಿನ ಜನರ ತರಬೇತಿ ಮತ್ತು ಅವರು ಅದನ್ನು ತಮ್ಮ ಚಿಂತನೆ ಮತ್ತು ನಡವಳಿಕೆಯಲ್ಲಿ ಅಳವಡಿಸಿಕೊಳ್ಳುವುದು. | प्रतिपुष्टि |
political Sociology | ರಾಜಕೀಯ ಸಮಾಜಶಾಸ್ತ್ರ | ರಾಜಕೀಯ ಸಂಸ್ಥೆಗಳು ಮತ್ತು ಪ್ರಕ್ರಿಯೆಗಳನ್ನು ಸಾಮಾಜಿಕ ಪರಿಸರದಲ್ಲಿ ಅಧ್ಯಯನ ಮಾಡುವ ವಿಜ್ಞಾನ. ಅಂದರೆ ಆ ಸಂಸ್ಥೆಗಳು ಮತ್ತು ಪ್ರಕ್ರಿಯೆಗಳ ಮೇಲೆ ಸಾಮಾಜಿಕ ಮೌಲ್ಯಗಳು, ಚಿಂತನೆಗಳು, ಸಂಪ್ರದಾಯಗಳು ಮತ್ತು ರಚನೆಗಳ ಪ್ರಭಾವಕ್ಕೆ ಮಹತ್ವ ನೀಡುವುದು. ಅಲ್ಲದೆ, ಸಮಾಜದ ಮೇಲೆ ರಾಜಕೀಯ ಕ್ರಿಯೆಗಳು ಮತ್ತು ಚಟುವಟಿಕೆಗಳ ಪರಿಣಾಮವನ್ನು ಅಧ್ಯಯನ ಮಾಡುತ್ತದೆ. ಹೀಗಾಗಿ, ರಾಜಕೀಯ ಸಮಾಜಶಾಸ್ತ್ರದ ವಿಷಯವೆಂದರೆ ಸಮಾಜ ಮತ್ತು ರಾಜಕೀಯದ ಪರಸ್ಪರ ಪ್ರಭಾವಲಯ ಮತ್ತು ಪ್ರಕ್ರಿಯೆಗಳ ಅಧ್ಯಯನವಾಗಿದೆ. | प्रतिपुष्टि |
political Stability | ರಾಜಕೀಯ ಸ್ಥಿರತೆ | ಯಾವುದೇ ದೇಶದ ರಾಜಕೀಯ ಸನ್ನಿವೇಶದಲ್ಲಿ ಸ್ಥಿರತೆ ಅಂದರೆ ಪದೇ ಪದೇ ಅಧಿಕಾರದ ಬದಲಾವಣೆ ಆಗದಿರುವುದು. ಸರ್ಕಾರ ತನ್ನ ನಿರ್ದಿಷ್ಟ ಅವಧಿಯವರೆಗೆ ಉಳಿಯುವುದು. | प्रतिपुष्टि |
political System | ರಾಜಕೀಯ ವ್ಯವಸ್ಥೆ | ರಾಜಕೀಯ ವ್ಯವಸ್ಥೆಯು ಸಮಾಜದಲ್ಲಿನ ರಚನೆಗಳು, ಪಾತ್ರಗಳು ಮತ್ತು ಪ್ರಕ್ರಿಯೆಗಳ ವ್ಯವಸ್ಥೆಯಾಗಿದ್ದು, ಅವುಗಳ ಮೂಲಕ ಸಮಾಜದಲ್ಲಿ ಅಧಿಕೃತ ನಿರ್ಧಾರ ಕೈಗೊಳ್ಳುವ ಮತ್ತು ಅದನ್ನು ಅನುಷ್ಠಾನಗೊಳಿಸುವ ವ್ಯವಸ್ಥೆ. ಈ ವ್ಯವಸ್ಥೆಯ ನಾಲ್ಕು ಮೂಲಭೂತ ಅಂಶಗಳೆಂದರೆ (1) ಇಡೀ ಸಮಾಜವನ್ನು ಒಳಗೊಂಡಿರುತ್ತದೆ. (2) ಅಧಿಕೃತ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿರುತ್ತದೆ. (3) ಆ ನಿರ್ಧಾರಗಳನ್ನು ಜಾರಿಗೊಳಿಸುವ ಮತ್ತು ಅಗತ್ಯವಿದ್ದರೆ ಬಲವನ್ನು ಬಳಸುವ ಅಧಿಕಾರವನ್ನು ಹೊಂದಿರುತ್ತದೆ. ಮತ್ತು (4) ಸಮಾಜವು ಈ ಹಕ್ಕನ್ನು ಸಮರ್ಥಿಸುತ್ತದೆ. | प्रतिपुष्टि |
political Theory | ರಾಜಕೀಯ ಸಿದ್ಧಾಂತ | ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳಾದ ರಾಷ್ಟ್ರ, ಸರ್ಕಾರ, ಸಾರ್ವಭೌಮತ್ವ, ಕಾನೂನು ಇತ್ಯಾದಿಗಳನ್ನು ಅಧ್ಯಯನ ಮಾಡುವುದು ರಾಜಕೀಯ ಸಿದ್ಧಾಂತವಾಗಿದೆ. ಇದರ ಒಂದು ಭಾಗವು ಆದರ್ಶವಾದದ್ದು ಮತ್ತು ವಿಮರ್ಶಾತ್ಮಕವಾದುದಾಗಿದೆ. ಇದನ್ನು ರಾಜಕೀಯ ತತ್ವಶಾಸ್ತ್ರ ಎಂದು ಕರೆಯಲಾಗುತ್ತದೆ. ಇದು ಅನುಭವ, ಪರಿಶೀಲನೆ ಮತ್ತು ವರ್ತನೆಯನ್ನು ಆಧರಿಸಿದ್ದು, ರಾಜಕೀಯ ಚಟುವಟಿಕೆಗಳನ್ನು ಮೌಲ್ಯಮಾಪನ ಮತ್ತು ವಿಶ್ಲೇಷಣೆ ಮಾಡುತ್ತದೆ. | प्रतिपुष्टि |
political Thinker | ರಾಜಕೀಯ ಚಿಂತಕ | ರಾಜಕೀಯ ವ್ಯವಸ್ಥೆ ಅಥವಾ ರಾಜಕೀಯ ತತ್ವಗಳ ವಿವಿಧ ಅಂಶಗಳ ಬಗ್ಗೆ ಮೂಲಭೂತ ಚಿಂತನೆ ಮತ್ತು ವಿಶ್ಲೇಷಣೆ ಮಾಡುವ ಬುದ್ಧಿಜೀವಿ. | प्रतिपुष्टि |
political Thought | ರಾಜಕೀಯ ಚಿಂತನೆ | ದೇಶ ಮತ್ತು ಆಡಳಿತಕ್ಕೆ ಸಂಬಂಧಿಸಿದಂತೆ ವಿವಿಧ ತತ್ವಜ್ಞಾನಿಗಳು ಮತ್ತು ಚಿಂತಕರ ಚಿಂತನೆಗಳು ಮತ್ತು ಅವರು ಪ್ರತಿಪಾದಿಸಿದ ತತ್ವಗಳ ಸಂಗ್ರಹ. | प्रतिपुष्टि |